ಚಿಂಗಾರಿ, ಇದು 2012 ರ ಕನ್ನಡ ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ದರ್ಶನ್, ಭಾವನಾ ರಾಮಣ್ಣ ಮತ್ತು ದೀಪಿಕಾ ಕಾಮಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಇದನ್ನು ಚಿಂಗಾರಾ ಎಂದು ಹಿಂದಿಗೆ ಡಬ್ ಮಾಡಲಾಗಿದೆ. ಬಿ. ಮಹದೇವು ₹೮.೫ ಕೋಟಿ (ಯುಎಸ್$೧.೮೯ ದಶಲಕ್ಷ) ) ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ ಈ ಚಲನಚಿತ್ರವು 2008 ರ ಫ್ರೆಂಚ್ - ಅಮೇರಿಕನ್ ಚಲನಚಿತ್ರ, ಟೇಕನ್ ಮತ್ತು 2007 ರ ಅಮೇರಿಕನ್ ಚಲನಚಿತ್ರ ಟ್ರೇಡ್‌ನಿಂದ ಪ್ರೇರಿತವಾಗಿದೆ ಎಂದು ವರದಿಯಾಗಿದೆ. == ಸಾರಾಂಶ == ಚಿತ್ರವು ಸೂಪರ್ ಕಾಪ್ ಸಿಸಿಬಿ ಅಧಿಕಾರಿ ಧನುಷ್ (ದರ್ಶನ್) ಸುತ್ತ ಸುತ್ತುತ್ತದೆ, ಅವರು ವೇಶ್ಯಾವಾಟಿಕೆಗೆ ಮಾರಾಟವಾಗಲಿರುವ ಸ್ವಿಟ್ಜರ್ಲೆಂಡ್‌ನಲ್ಲಿ ಅಪಹರಣಕ್ಕೊಳಗಾದ ತನ್ನ ಗೆಳತಿಯನ್ನು ರಕ್ಷಿಸಲು ಹೊರಟಾಗ ನಡೆಯುವ ಕಥೆಯಾಗಿದೆ. == ಪಾತ್ರವರ್ಗ == ಧನುಷ್ ಪಾತ್ರದಲ್ಲಿ ದರ್ಶನ್ ಗೀತಾ ಪಾತ್ರದಲ್ಲಿ ದೀಪಿಕಾ ಕಾಮಯ್ಯ ಭಾವನಾ ಸೃಜನ್ ಲೋಕೇಶ್ ಯಶಸ್ ಸೂರ್ಯ ವೆರಾ ಪ್ರನ್ ರಿಚರ್ಡ್ ಕೋಬಿಲ್ (ನಟ) ಜಮ್ಶೆಮ್ ಆಗಿ ವಿನೀಶ್ ಮಲ್ಹೋತ್ರಾ ಪಾತ್ರದಲ್ಲಿ ಮಧು ಗುರುಸ್ವಾಮಿ == ಬಿಡುಗಡೆ == ಚಲನಚಿತ್ರವು 3 ಫೆಬ್ರವರಿ 2012 ರಂದು 180+ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿಂಗಾರಿ ತನ್ನ ಮೊದಲ ದಿನದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ಒಟ್ಟು ಮೊತ್ತವನ್ನು ಸಂಗ್ರಹಿಸಿತು, ಚಿಂಗಾರಿಯು ಕನ್ನಡೇತರ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದ ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಗಳಿಸಿತು. == ಧ್ವನಿಮುದ್ರಿಕೆ == 2 ಜನವರಿ 2012 ರಂದು ನಡೆದ ಚಿಂಗಾರಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವನ್ನೂ ಎ. ಹರ್ಷ ನಿರ್ದೇಶನ ಮಾಡಿದರು, ಸುದೀಪ್ ಅವರು ಆಡಿಯೋ ಬಿಡುಗಡೆ ಮಾಡಿದರು. ಕವಿರಾಜ್, ಯೋಗರಾಜ ಭಟ್ ಮತ್ತು ಜಯಂತ ಕಾಯ್ಕಿಣಿ ಅವರ ಸಾಹಿತ್ಯಕ್ಕೆ ವಿ.ಹರಿಕೃಷ್ಣ ಅವರು 5 ಹಾಡುಗಳನ್ನು ಸಂಯೋಜಿಸಿದ್ದಾರೆ. == ವಿಮರ್ಶೆ == ರೆಡಿಫ್ ಚಿತ್ರಕ್ಕೆ 3 ಸ್ಟಾರ್‌ಗಳನ್ನು ನೀಡಿತು ಮತ್ತು ವೇಣು ಅವರ ಕ್ಯಾಮೆರಾವರ್ಕ್ ಅನ್ನು ಹೊಗಳಿ ದರ್ಶನ್ ಮತ್ತು ದೀಪಿಕಾ ಕಾಮಯ್ಯ ಅವರ ಅಭಿನಯವನ್ನು ಮೆಚ್ಚಿತು. ಅದಕ್ಕೆ 3 ಸ್ಟಾರ್‌ಗಳನ್ನು ನೀಡಿ ಹೇಳೀತು "ದರ್ಶನ್ ಅವರ ಸೊಗಸಾದ ನೋಟ, ಹಾಸ್ಯಮಯ ನಟನೆಗಳು ಮತ್ತು ಉಸಿರು ಬಿಗಿಹಿಡಿಸುವ ಆಕ್ಷನ್ ಸೀಕ್ವೆನ್ಸ್‌ಗಳಿಂದ ಪ್ರಭಾವ ಬೀರುತ್ತಾರೆ. ಅವರು ತಮ್ಮ ಅತ್ಯುತ್ತಮ ಪರದೆಯ ಮೇಲಿನ ಹಾಜರಿಯಿಂದ ಇಡೀ ಚಲನಚಿತ್ರವನ್ನು ಆಕ್ರಮಿಸಿಕೊಳ್ಳುತ್ತಾರೆ." == ಬಾಕ್ಸ್ ಆಫೀಸ್ ಗಳಿಕೆ == ವಿತರಕ ಪ್ರಸಾದ್ ಪ್ರಕಾರ ಇದರ ಮೊದಲ ವಾರದ ಒಟ್ಟು ಕಲೆಕ್ಷನ್ ₹ 6 ಕೋಟಿ ರೂಪಾಯಿ ದಾಟಿದೆ . ಬಿಡುಗಡೆಯಾದ ಮೊದಲ ವಾರದಲ್ಲಿ ವಿತರಕರ ಪಾಲು ಸುಮಾರು ₹ 5 ಕೋಟಿ ರೂಪಾಯಿ ಆಗಿರುತ್ತದೆ. 10 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿತು. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಚಿಂಗಾರಿ @ ಐ ಎಮ್ ಡಿ ಬಿ